ಮೈಸೂರು, ಮಾ.9: ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಾಲಯದಲ್ಲಿ, ಭಾರತ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಗೆದ್ದು ಬರಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ ಜಯಗಳಿಸಲೆಂದು ವಿಘ್ನ ವಿನಾಶಕ ವಿಘ್ನೇಶ್ವರನಲ್ಲಿ ವಿಶೇಷ ಪೂಜೆ ಮಾಡಿಸಿ, 101 ತೆಂಗಿನಕಾಯಿಗಳನ್ನು ಈಡುಗಾಯಿ ಹೊಡೆಯಲಾಯಿತು.
ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಕಪ್ ಗೆಲ್ಲಲಿ ಎಂದು ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಂಸ್ಕೃತಿ ಪೋಷಕ ಡಾ. ರಘುರಾಮ್ ವಾಜಪೇಯಿ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ಸುರೇಶ್ ಗೋಲ್ಡ್, ಪ್ರಭಾಕರ್, ಕುಮಾರ್ ಗೌಡ, ಪ್ರಜೀಶ್, ಪ್ರಭುಶಂಕರ್, ಕೇದಾರ್ ಲೋಕೇಶ್ , ನೇಹಾ, ಕೃಷ್ಣಪ್ಪ, ಸಿಂಧುವಳ್ಳಿ ಶಿವಕುಮಾರ್, ಹನುಮಂತಯ್ಯ, ನಂದಕುಮಾರ್, ಚಂದ್ರಶೇಖರ್, ರವೀಶ್, ರವಿ ನಾಯಕ್, ವಿಷ್ಣು, ಮಹದೇವಸ್ವಾಮಿ ಪರಿಸರ ಚಂದ್ರು, ಆನಂದ್ ಗೌಡ, ತ್ಯಾಗರಾಜ್ ಸುಬ್ಬೇಗೌಡ, ಜಗದೀಶ್ ಮತ್ತಿತರರು ಹಾಜರಿದ್ದರು.

ಭಾರತ ತಂಡದ ಆಟಗಾರರ ಭಾವಚಿತ್ರಗಳು ಮತ್ತು ಭಾರತದ ಬಾವುಟಗಳನ್ನು ಭಾರತ ಗೆದ್ದು ಬಾ ಮುಂತಾದ ಘೋಷಣೆಗಳನ್ನು ಕೂಗಿದರು.ಗೆದ್ದು ಬಾ ಭಾರತ ಗೆದ್ದು ಬಾ,ಬೊಲೊ ಭಾರತ್ ಮಾತಾಕೀ ಜೈ, ಒಂದೇ ಮಾತರಂ, ಜೈ ಹಿಂದ್ ಮುಂತಾದ ಘೋಷಣೆಗಳು ಮೊಳಗಿದವು.