1.20 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಎ.ಆರ್.ಕೃಷ್ಣಮೂರ್ತಿ ಗುದ್ದಲಿ ಪೂಜೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಸಿದ್ದಯ್ಯನಪುರ ಹಾಗೂ ತಿಮ್ಮರಾಜೀಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 1.20 ಕೋಟಿ ರೂ. ವೆಚ್ಚದ ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಗುದ್ದಲಿಪೂಜೆ ನೆರವೇರಿಸಿದರು.

ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅನುದಾನ
50 ಲಕ್ಷ ರೂ ವೆಚ್ಚದಲ್ಲಿ ಅರುಣೋದಯ ಚರ್ಚ್ ನ ಮುಂದುವರೆದ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು 2008 ರಲ್ಲಿ ನಾನು ಭೇಟಿ ಕೊಟ್ಟಿದ್ದಾಗ ಅರುಣೋದಯ ಚರ್ಚ್ ಮಟ್ಟಾಳೆ ಶೆಡ್ ನಲ್ಲಿ ಸೇವಾಕಾರ್ಯಗಳು ನಡೆಯುತ್ತಿದ್ದವು, ಈ ಚರ್ಚ್ ಗೆ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕೆಂದು ಆಗಲೇ ಅಂದುಕೊಂಡಿದ್ದೆ ಎಂದು ತಿಳಿಸಿದರು.

ಈಗ 2025 ಸುಮಾರು 17 ವರ್ಷಗಳ ನಂತರ ಇಲ್ಲಿಗೆ ಬಂದಿದ್ದೇನೆ ನಾನು ಶಾಸಕನಾಗಿ ಎರಡು ವರ್ಷ ತುಂಬಿದೆ, ಕ್ಷೇತ್ರಕ್ಕೆ 25 ಕೋಟಿ ಅನುದಾನ ನೀಡಿದ್ದು ಎಲ್ಲಾ ಜನಾಂಗ, ಎಲ್ಲಾ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ.

50 ಲಕ್ಷ ರೂಗಳನ್ನು ಈ ಕೃಷ್ಣ ಮುಂದುವರಿದ ಕಾಮಗಾರಿಗೆ ನೀಡಿದ್ದೇನೆ. ನಿಮ್ಮ ಚರ್ಚ್ ಅಲ್ಲದೆ ಲೂಥರನ್ ಚರ್ಚ್ ಗೂ ಅನುದಾನ ನೀಡಿದ್ದೇವೆ. ನಾನು ಸಹ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದವನು. ನಾನು ಬೆಂಗಳೂರಿನಲ್ಲಿ ಓದುವಾಗ ಕ್ರೈಸ್ತ ಮಿಷಿನರಿಯಲ್ಲಿ ಶಿಕ್ಷಣ ಪಡೆದಿದ್ದೇನೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.

ನಂತರ ಪ ಜಾತಿ ಬೀದಿಯಲ್ಲಿ 6 ಲಕ್ಷ ರೂ ಹಾಗೂ ಕುರುಬ ಸಮುದಾಯ ಬೀದಿಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ, ಲಕ್ಕರಸನಪಾಳ್ಯ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ, ತಿಮ್ಮರಾಜೀಪುರ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅನುದಾನ 20 ಲಕ್ಷ ರೂಗಳ ವೆಚ್ಚದಲ್ಲಿ ಬಸವ ಭವನ ನಿರ್ಮಾಣ ಕಾಮಗಾರಿ ಹಾಗೂ 10 ಲಕ್ಷ ರೂಗಳ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ಹಿತ್ತಲದೊಡ್ಡಿ ಗ್ರಾಮದಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಈ ಅರುಣೋದಯ ಚರ್ಚ್ ಫಾದರ್ ಅಮಲ್ ದಾಸ್, ಧರ್ಮ ಪ್ರಚಾರಕ ಜೆರುಬಾಬಲ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುಂತೂರು ರಾಜೇಂದ್ರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರ ಸಭೆ ಮಾಜಿ ಅಧ್ಯಕ್ಷರುಗಳಾದ ಉಮೇಶ್ ಬಸ್ತಿಪುರ ಶಾಂತರಾಜು, ಸದಸ್ಯರುಗಳಾದ ಜಿ.ಎಂ.ಸುರೇಶ್, ಸ್ವಾಮಿನಂಜಪ್ಪ,
ದೇವಾನಂದ್, ಇ.ಒ.ಗುರುಶಾಂತಪ್ಪ ಬೆಳ್ಳುಂಡಗಿ, ಕೆ.ಆರ್.ಐ.ಡಿ.ಎಲ್ ಸಹಾಯಕ ಕಾರ್ಯ ಪಾಲಕ ಅಭಿಯಂತರ ಚಿಕ್ಕಲಿಂಗಯ್ಯ, ಜೆಇ ಕಾರ್ತಿಕ್, ನಿರ್ಮಿತಿ ಕೇಂದ್ರದ ಜೆ.ಇ.ಪ್ರತಾಪ್, ಗುತ್ತಿಗೆದಾರ ಪುಟ್ಟಸ್ವಾಮಿ, ಸಿದ್ದಯ್ಯನಪುರ ಗ್ರಾ.ಪಂ.ಅಧ್ಯಕ್ಷೆ ಶಾಂತಮ್ಮ, ಸದಸ್ಯೆ ಲಕ್ಮೀ, ಪಿಡಿಒ ಶಿವಮೂರ್ತಿ, ತಿಮ್ಮರಾಜೀಪುರ ಗ್ರಾ.ಪಂ.ಅಧ್ಯಕ್ಷೆ ರಶ್ಮಿರಾಜು, ಉಪಾಧ್ಯಕ್ಷೆ ಸಹನಪ್ರಿಯ, ಸದಸ್ಯರಾದ ಕೆಂಪರಾಜು, ಕುಮಾರ್, ಫಿಲಿಪ್ ಮೋಹನ್ ಕುಮಾರ್, ತಾ.ಪಂ.ಮಾಜಿ ಸದಸ್ಯ ಮರಿಸ್ವಾಮಿ ಮತ್ತಿತರರು ಭಾಗವಹಿಸಿದ್ದರು.