ಹಾಸನ: ಬೆಂಗಳೂರು- ಹಾಸನ-ಮಂಗಳೂರು ಮಾರ್ಗದ ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದ ಮಣ್ಣು ಕುಸಿದ ಪರಿಣಾಮ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಸ್ಥಗಿತವಾಗಿದೆ.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ರೈಲು ನಿಲ್ದಾಣ ಬಳಿ ರೈಲ್ವೆ ಹಳಿ ಮೇಲೆಯೇ ಭಾರಿ ಪ್ರಮಾಣದ ಕಲ್ಲು ಬಂಡೆ ಮತ್ತು ಮಣ್ಣು ಕುಸಿದು ಬಿದ್ದಿದ್ದು ರೈಲು ಸ್ಥಗಿತಗೊಂಡ ಕಾರಣ ಸಾವಿರಾರು ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿ ಪಡಿಪಾಟಲು ಪಟ್ಟರು.
ಮಧ್ಯರಾತ್ರಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಆಯಾ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ.
ಹಾಸನ -ಮಂಗಳೂರು ಮಾರ್ಗದ ಕಿಲೋಮಿಟರ್ 42/ 43ರ ಮಧ್ಯೆ ಮರಗಳ ಸಮೇತ ಮಣ್ಣು ಕುಸಿತವಾಗಿದೆ ರೈಲ್ವೆ ಹಳಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣಿನ ಗುಡ್ಡ,ಕಲ್ಲು ಬಂಡೆ ಬಿದ್ದಿದೆ.