ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ,ಲೇಖನ ಸಾಮಾಗ್ರಿ ವಿತರಿಸಿದ‌ ವಿದ್ಯಾ ಸ್ಪಂದನ ಸಂಸ್ಥೆ

Spread the love



ಮೈಸೂರು: ಮೈಸೂರಿನ ಚಿಕ್ಕಕಾನ್ಯ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾಸ್ಪಂದನ ಸಂಸ್ಥೆಯಿಂದ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ವಿದ್ಯಾ ಸ್ಪಂದನ ಸಂಸ್ಥೆಯ ಅಧ್ಯಕ್ಷ ಪುನೀತ್ ಜಿ ಕೂಡ್ಲೂರು ಅವರು, ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಬೇಕು ಎಂದು ತಿಳಿಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ತಿಳಿಸಿರುವುಂತೆ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಕಳೆದ 13 ವರ್ಷಗಳಿಂದ ವಿದ್ಯಾ ಸ್ಪಂದನ ಸಂಸ್ಥೆಯು ಅವಶ್ಯಕತೆ ಇರುವವರಿಗೆ ಶೈಕ್ಷಣಿಕ ಸೇವೆ ಮಾಡುತ್ತಿದೆ ಎಂದು ತಿಳಿಸಿದರು.

ಆಪರೇಷನ್ ಸಿಂಧೂರದ ಮೂಲಕ ನಮ್ಮ ಸೈನಿಕರು ಭಯೋತ್ಪಾದಕರಿಗೆ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ ಅಂತಹ‌ ಧೈರ್ಯ ಮತ್ತು ಶಕ್ತಿ ಇಂದು ಭಾರತ ಗಳಿಸಿದೆ. ಶಿಕ್ಷಣ ಮುಗಿಸಿ ನೀವು ಸಹ ಭಾರತೀಯ ಸೇನೆ ಹಾಗೂ ಇತರ ಉದ್ಯೋಗಗಳನ್ನು ಮಾಡಿ ದೇಶ ಸೇವೆ ಮಾಡಬೇಕು ನಮ್ಮ ಜೀವನದಲ್ಲಿ ದೇಶಭಕ್ತಿ ಅಳವಡಿಸಿಕೊಂಡು ಬದುಕಬೇಕು ಎಂದು ಪುನೀತ್ ಜಿ ಕೂಡ್ಲೂರು ತಿಳಿಸಿದರು.

ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಆರ್. ಗಣೇಶ್ ಭಗವದ್ಗೀತೆ ಪುಸ್ತಕ ಹಾಗೂ ಪದಕಗಳನ್ನು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಮಧುಸೂದನ್, ಫಣೀಶ್, ಕೆ.ಆರ್.ಗಣೇಶ್,ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್, ಸಹ ಶಿಕ್ಷಕಿ ಮಂಜುಳ,ಸಿ ಆರ್ ಪಿ ಮಹದೇವಸ್ವಾಮಿ,ಎಸ್ ಡಿ ಎಂ ಸಿ ಮಾದೇಸ್ವಾಮಿ, ಸೌಮ್ಯ, ಸಂಪ್ರೀತ್ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.