ರಾಜಾ ಕಾಲುವೆ ಮೇಲೆ‌ ಕಟ್ಟಿದ್ದ ಕಟ್ಟಡ ತೆರವು

ಮೈಸೂರು: ರಾಜಾ ಕಾಲುವೆಯನ್ನೆ ಆಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಕಟ್ಟಡವನ್ನ ತಾಲೂಕು ಆಡಳಿತ ತೆರವು ಗೊಳಿಸಿತು.

ಅಕ್ರಮ ಕಟ್ಟಡದ ಬಗ್ಗೆ ಆರ್.ಟಿ.ಐ
ಕಾರ್ಯಕರ್ತ ಬಿ.ಎನ್.ನಾಗೇಂದ್ರ ನೀಡಿದ ದೂರಿನ ಅನ್ವಯ ದಾಖಲೆಗಳನ್ನ ಪರಿಶೀಲಿ ಸಿದ ತಹಸೀಲ್ದಾರ್ ಮಹೇಶ್ ಕುಮಾರ್ ಕಟ್ಟಡವನ್ನ ತೆರುವುಗೊಳಿಸಿದ್ದಾರೆ.

ಮೈಸೂರಿನ ಕುರುಬಾರಹಳ್ಳಿ ಗ್ರಾಮದ ಸರ್ವೆ ನಂ.4ರ ಕೆ.ಸಿ.ಬಡಾವಣೆಯಲ್ಲಿ ಹಾದು ಹೋಗಿರುವ ರಾಜಾಕಾಲುವೆಯನ್ನು ಆಕ್ರಮಿಸಿಕೊಂಡು ಚಂದ್ರಶೇಖರ್ ಎಂಬಾತ ನಕಲಿ ದಾಖಲೆಗಳನ್ನ ಸೃಷ್ಟಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಲ್ಲದೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಪಡೆದಿದ್ದರು.

ಜೆಸಿ ನಗರ ನಿವೇಶನ ಸಂಖ್ಯೆ 309/1 ರ ಹೆಸರಿನಲ್ಲಿ ವಲಯ ಕಚೇರಿ 1ರಲ್ಲಿ ಕಂದಾಯ ಪಾವತಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಸಿ ಬಡಾವಣೆಯಲ್ಲಿ ರಾಜಾಕಾಲುವೆ ಮತ್ತು ಬಫರ್ ಜೋನ್ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರು.

ಆರ್ ಟಿ ಐ ಮೂಲಕ ಈ ಬಗ್ಗೆ ಮಾಹಿತಿ ಪಡೆದ ಬಿ.ಎನ್.ನಾಗೇಂದ್ರ ತಹಸೀಲ್ದಾರ್ ರವರಿಗೆ ಲಿಖಿತ ದೂರು ನೀಡಿದ್ದರು.